Sabbasige Soppina Palya - Kannada

Last Updated : 21 Aug 2017

1262-sabbasige-soppina-palya---kannada

Pooja

Recipes 83
  • Servings 3
  • Cook Time 15 min
  • Prep Time 10 min

Upload Your Favourite Recipes & Win Rewards

Upload Recipe

Description:

ಸಬ್ಬಸಿಗೆ ಸೊಪ್ಪಿನ ಪಲ್ಯ ,ಸಬ್ಬಸಿಗೆ ರುಚಿ ಹಾಗು ಆರೋಗ್ಯ ಎರಡನ್ನು ನೀಡುವ ಒಂದು ಉಪೋಯೋಗಕಾರಿ ಸೊಪ್ಪು .

Ingredients:

  • 1 ಕಟ್ಟು ಸಬ್ಬಸಿಗೆ ಸೊಪ್ಪು
  • 1 ಕತ್ತರಿಸಿದ ಈರುಳ್ಳಿ
  • 4-5 ಉದ್ದಗೆ ಕತ್ತರಿಸಿದ ಹಸಿ ಮೆಣಸಿನಕಾಯಿ
  • 1 ಕಪ್ ಬಿಡಿಸಿದ ಹಸಿ ಅವರೇ ಕಾಳು
  • 1 ಕಪ್ ತುರಿದ ತೆಂಗಿನ ಕಾಯಿ
  • 1/2 ಚಮಚ ಸಾಸಿವೆ
  • 1/2 ಚಮಚ ಜೀರಿಗೆ
  • 5-6 ಕರಿಬೇವು
  • ಎಣ್ಣೆ 1/2 ಚಮಚ

Instructions:

  • ಸೊಪ್ಪನ್ನು ಸ್ವಚ್ಛ ಮಾಡಿ ,ಚೆನ್ನಾಗಿ ಬೆಚ್ಚಗಿನ ನೀರಿನಿಂದ ತೊಳೆಯಿರಿ
  • ಸೊಪ್ಪನ್ನು ನಿಮಗೆ ಬೇಕಾದ ಅಳತೆಯಲ್ಲಿ ಕತ್ತರಿಸಿಕೊಳ್ಳಿ
  • ಸೊಪ್ಪನ್ನು ಬೇರೊಂದು ಪಾತ್ರೆಯಲ್ಲಿ ಬೇಯಿಸಿಕೊಳ್ಳಿ . ನೀರಿನ ಅಂಶವನ್ನು ತೆಗೆಯಿರಿ ( ಇದನ್ನು ಸಾರು ಮಾಡಲು ಬಳಸಬಹುದು )
  • ಅವರೇ ಕಾಳನ್ನು ಕುಕ್ಕರ್ ನಲ್ಲಿ ಚೆನ್ನಾಗಿ ಬೇಯಿಸಿ ಒಂದೆಡೆ ಇಡಿ
  • ಇನ್ನೊಂದು ಪಾತ್ರೆಯಲ್ಲಿ ಎಣ್ಣೆ ಹಾಕಿ, ಎಣ್ಣೆ ಕಾದ ನಂತರ ಸಾಸಿವೆ,ಜೀರಿಗೆ, ಕರಿಬೇವು ಹಾಗು ಈರುಳ್ಳಿ ಹಾಕಿ ಉರಿದು ವಗ್ಗರಣೆ ಸಿದ್ದ ಮಾಡಿಕೊಳ್ಳಿ
  • ಸಿದ್ದವಾದ ಒಗ್ಗರಣೆಗೆ ಬೆಂದ ಸೊಪ್ಪು ಮತ್ತು ಅವರೇ ಕಾಳನ್ನು ಹಾಕಿ ಸ್ವಲ್ಪ ಹೊತ್ತು ಗೊಲಿಸಿ. ತಟ್ಟೆಯನ್ನು ಮುಚ್ಚಿ ಸಣ್ಣ ಉರಿಯಲ್ಲಿ 4-5 ನಿಮಿಷ ಬಿಡಿ . ನಂತರ ಗ್ಯಾಸ್ ಆರಿಸಿ
  • ನಂತರ ಇದನ್ನು ಅನ್ನ ಸಾಂಬಾರ್ ಜೊತೆಯಾಗಿ ಅಥವಾ ಹಾಗೆಯೇ ಕೂಡ ಸೇವಿಸಬಹುದು .

Categories:

Rate this recipe

Comments (0)