Finger Chips (French Fries) - Kannada

Last Updated : 07 Jul 2017

1193-finger-chips-french-fries---kannada

Pooja

Recipes 74
  • Servings 2
  • Cook Time 10 min
  • Prep Time 5 min

Upload Your Favourite Recipes & Win Rewards

Upload Recipe

Description:

ಸುಲಭವಾಗಿ ಮನೆಯಲ್ಲೇ ತಯಾರಿಸಬಹುದಾದ ಫಿಂಗರ್ ಚಿಪ್ಸ್

Ingredients:

  • 4 ಆಲೂಗಡ್ಡೆ
  • 1/2 ಚಮಚ ಅರಿಶಿನ
  • 1 ಚಮಚ ಉಪ್ಪು
  • 1/2 ಲೀಟರ್ ಎಣ್ಣೆ ಕರೆಯಲು
  • ಚಾಟ್ ಮಸಾಲಾ

Instructions:

  • ಮೊದಲು ಆಲೂಗಡ್ಡೆಯ ಸಿಪ್ಪೆ ತೆಗೆದು ಉದ್ದವಾಗಿ ಹೆಚ್ಚಿಕೊಳ್ಳಿ
  • ಒಂದು ಪಾತ್ರೆಯಲ್ಲಿ ಹೆಚ್ಚಿದ ಆಲೂಗಡ್ಡೆಯನ್ನು ಹಾಕಿ ,ಆಲೂಗಡ್ಡೆ ಮುಳುಗುವಷ್ಟು ನೀರು ಹಾಕಿ ,ಇದಕ್ಕೆ 1 ಚಮಚ ಉಪ್ಪು ಮತ್ತು ಸ್ವಲ್ಪ ಅರಿಶಿನ ಹಾಕಿ ಬೇಯಲು ಇಡಿ
  • ಇನ್ನೊಂದರಲ್ಲಿ ಎಣ್ಣೆಯನ್ನು ಹಾಕಿ ಬಿಸಿಯಾಗಲು ಇಡಿ
  • ಬೆಂದ ಆಲೂಗಡ್ಡೆಯನ್ನು ನೀರಿನಿಂದ ಬಸಿದು ( ನೀರಿನ ಅಂಶ ಹೋಗುವ ವರೆಗೂ ಬಸಿಯಿರಿ ) ಒಂದು ತಟ್ಟೆಯಲ್ಲಿ ಹಾಕಿಡಿ .ಆಲೂಗಡ್ಡೆಯನ್ನು ಅರ್ಧ ಮಾತ್ರ ಬೇಯಿಸಿಕೊಳ್ಳಿ (ಸ್ವಲ್ಪ ಗಟ್ಟಿ ಇರುವಾಗಲೇ ನೀರಿನಿಂದ ತೆಗೆಯಿರಿ )
  • ತಟ್ಟೆಯಲ್ಲಿರುವ ಆಲೂಗಡ್ಡೆಯನ್ನು ನಿಧಾನವಾಗಿ ಎಣ್ಣೆಯಲ್ಲಿ ಹಾಕಿ (ಎಣ್ಣೆ ಚೆನ್ನಾಗಿ ಕಾಡಿರಬೇಕು) ಕೆಂಪಗಾಗುವ ವರೆಗೆ ಕರಿಯಿರಿ
  • ಕರೆದ ಆಲೂಗಡ್ಡೆಯನ್ನು ಬೇರೊಂದು ತಟ್ಟೆಯಲ್ಲಿ ತೆಗೆದು ಹಾಕಿರಿ, ಬಿಸಿ ಇರುವಾಗಲೇ ಚಾಟ್ ಮಸಾಲವನ್ನು ಹಾಕಿರಿ
  • ಬಿಸಿ ಬಿಸಿ ಚಿಪ್ಸ್ ಗಳನ್ನು ಸಾಸ್ ಜೊತೆಗೆ ಸವಿಯಿರಿ ( ತಣ್ಣಗಾದ ಮೇಲೆ ರುಚಿಸುವುದಿಲ್ಲ )

Categories:

Rate this recipe

Comments (0)