Rave uppittu - Kannada

Last Updated : 21 Jun 2017

1158-rave-uppittu---kannada

Pooja

Recipes 83
  • Servings 2
  • Cook Time 10 min
  • Prep Time 10 min

Upload Your Favourite Recipes & Win Rewards

Upload Recipe

Description:

ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ರವೇ ಉಪ್ಪಿಟ್ಟು

Ingredients:

  • ೧ ಲೋಟ ರವೇ ,
  • ೧ ಟೊಮೇಟೊ ,
  • ೫ ಹಸಿ ಮೆಣಸಿನಕಾಯಿ ,
  • ೩ ಈರುಳ್ಳಿ ೨ ಎಸಳು ಕರಿಬೇವು ,
  • ಅರ್ಧ ಕಪ್ ತುರಿದ ಕಾಯಿ
  • ೨ ಚಮಚ ಎಣ್ಣೆ,
  • ಅರ್ಧ ಚಿಕ್ಕ ಚಮಚ ಸಾಸಿವೆ ,
  • ಸ್ವಲ್ಪ ಜೀರಿಗೆ ,
  • ೧ ಚಮಚ ಕಡಲೆಬೇಳೆ

Instructions:

  • ಪಾತ್ರೆಯಲ್ಲಿ ಚಿಕ್ಕ ಚಮಚ ಎಣ್ಣೆ ಹಾಕಿ, ರವೆಯನ್ನು ಸ್ವಲ್ಪ ಬಿಸಿ ಹಾಗುವ ಹಾಗೆ ಉರಿಯಿರಿ.
  • ಉರಿದ ರವೆಯನ್ನು ಒಂದೆಡೆ ಇಟ್ಟುಕೊಳ್ಳಿ
  • ಪಾತ್ರೆಯಲ್ಲಿ 2 ಚಮಚ ಎಣ್ಣೆ ಹಾಕಿ, ಎಣ್ಣೆ ಕಾದ ನಂತರ ಅದಕ್ಕೆ ಸಾಸಿವೆ,ಜೀರಿಗೆ,ಕರಿಬೇವು,ಕಡಲೆಬೇಳೆ ಹಾಕಿ ಉರಿಯಿರಿ
  • ನಂತರ ಈರುಳ್ಳಿ ,ಮೆಣಸಿನಕಾಯಿ ಹಾಕಿ ಗೊಲಿಸಿ,2 ನಿಮಿಷದ ನಂತರ ಟೊಮೊಟೊ ಹಾಕಿ ಗೊಲಿಸಿ
  • ವಗ್ಗರಣೆ ಆದ ನಂತರ ಅದಕ್ಕೆ 2.5 ಲೋಟ ನೀರು ಹಾಕಿ,ಕುದಿಯಲಿ ಬಿಡಿ (ಹಾಕಿರುವ ಸಾಮಗ್ರಿಗಳು ಬೇಯುವ ವರೆಗೆ).
  • ನಂತರ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಮತ್ತು ಚಿಟಿಕೆ ಅರಿಶಿನ ಹಾಕಿ ಚೆನ್ನಾಗಿ ಬೆರೆಸಿ
  • 2 ನಿಮಿಷದ ನಂತರ,ರವೆಯನ್ನು ಸ್ವಲ್ಪ ಸ್ವಲ್ಪವೇ ಹಾಕುತ್ತಾ ಬನ್ನಿ (ದೊಡ್ಡ ಚಮಚದಿಂದ ಗುರಾಡುತ್ತಲೆ ಇರಿ) .ನಂತರ ಕಾಯಿಯನ್ನು ಹಾಕಿ ಗೂರಾಡಿ.
  • ಗ್ಯಾಸ್ ಉರಿಯನ್ನು ಸಣ್ಣಗೆ ಮಾಡಿ,ಪಾತ್ರೆಯ ಮೇಲೆ ತಟ್ಟೆಯನ್ನು ಮುಚ್ಚಿ 4-5 ನಿಮಿಷ ಬಿಡಿ
  • ಬೆಂದ ನಂತರ ತಟ್ಟೆಯಲ್ಲಿ ಬಡಿಸಿಕೊಂಡು ಬಿಸಿ ಬಿಸಿ ಉಪ್ಪಿಟ್ಟನ್ನು ಸವಿಯಿರಿ

Categories:

Rate this recipe

Comments (0)