Dal tadka (Kannada) | Hungryaar

Dal tadka (Kannada)

Last Updated : 14 Jun 2016 2:24 PM

428-dal-tadka-kannada

Anshu

Recipes 22
  • Servings 4
  • Cook Time 130 min
  • Prep Time 20 min

Upload Your Favourite Recipes & Win Rewards

Upload Recipe

Language:

Description:

ದಾಲ್ ತಡ್ಕವನ್ನು ದಾಲ್ ಫ್ರೈ ನ ರೂಪಾಂತರವಾಗಿದೆ, ಇದರ ತಯಾರಿಕೆಯು ಸರಳವಾಗಿದೆ. ದಾಲ್ ತಡ್ಕಾವನ್ನು ನೀವು ರೋಟಿ, ಪರೋಟ, ಹಾಗೂ ಅನ್ನದೊ೦ದಿಗೂ ಸೇವಿಸಬಹುದು. ರೆಸ್ಟೋರೆ೦ಟ್ ಶೈಲಿಯ ದಾಲ್ ಫ್ರೈಯನ್ನು ಮನೆಯಲ್ಲಿಯೇ ತಯಾರಿಸುವಷ್ಟು ಸ೦ತಸದಾಯಕ ವಿಚಾರವು ಬೇರಾವುದೂ ಇರಲಾರದು. ದಾಲ್ ತಡ್ಕಾ ತಯಾರಿಸುವ ವಿಧಾನ ಈ ಕೆಳಗಿನಂತೆ ಇರುತ್ತದೆ:

Ingredients:

  • 50 ಗ್ರಾಂ ಹೆಸರುಬೇಳೆ
  • 25 ಗ್ರಾಂ ಮಸೂರ ಬೇಳೆ
  • 25 ಗ್ರಾಂ ತೊಗರಿ ಬೇಳೆ (ವಿಭಜಿತ ಬಟಾಣಿ ಮಸೂರ)
  • 1/4 ಟೀ ಚಮಚ ಅರಿಶಿನ ಪುಡಿ
  • 1 ಕತ್ತರಿಸಿದ ಟೊಮೆಟೊ
  • 2 ರಿಂದ 3 ಹಸಿರು ಮೆಣಸಿನಕಾಯಿ
  • ಉಪ್ಪು ರುಚಿಗೆ ತಕ್ಕಷ್ಟು
  • 2 ಚಮಚ ತುಪ್ಪ
  • 1/2 ಟೀ ಚಮಚ ಸಾಸಿವೆ (ಸರ್ಸೋಂ)
  • 1 ಟೀ ಚಮಚ ಜೀರಿಗೆ (ಜೀರಾ)
  • ಸ್ವಲ್ಪ ಇಂಗು.
  • ¼ ಟೀ ಚಮಚ ಲವಂಗ ಪುಡಿ
  • 6-7 ಬೆಳ್ಳುಳ್ಳಿ
  • 2 ರಿಂದ 3 ಒಣಗಿದ ಕೆಂಪು ಮೆಣಸಿನಕಾಯಿ
  • 1 ಟೀ ಚಮಚ ಗರಂ ಮಸಾಲ
  • ಸ್ವಲ್ಪ ಕೊತ್ತುಂಬರಿ ಸ್ವಪ್ಪು.
  • 1.5 ಚಮಚ ತಾಜಾ ಕೆನೆ (ಕ್ರೀಮ್)

Instructions:

  • ಬೇಳೆಗಳ ನ್ನು ಚೆನ್ನಾಗಿ ತೊಳೆದು 2 ಘಂಟೆಗಳ ಕಾಲ ನೀರಿನಲ್ಲಿ ನೆನಸಿಡಿ. ನಂತರ ಕುಕ್ಕರ್ ನಲ್ಲಿ ಸ್ವಲ್ಪ ಎಣ್ಣೆ, ಸೀಳಿದ ಹಸಿರು ಮೆಣಸಿನಕಾಯಿಗಳು, ಅರಿಶಿನ ಪುಡಿ, ಸ್ವಲ್ಪ ಉಪ್ಪು ಮತ್ತು ನೀರಿನ ಜೊತೆಯಲ್ಲಿ ಬೇಳೆಯನ್ನು ಸೇರಿಸಿ ಬೇಯಿಸಿ ಇಟ್ಟುಕೊಳ್ಳಿ.
  • ನಂತರ ಒಂದು ಬಾಣಲಿಯಲ್ಲಿ ಸ್ವಲ್ಪ ತುಪ್ಪ ಹಾಕಿ ಸಾಸುವೆ, ಜೀರಿಗೆ, ಇಂಗು ಸೇರಿಸಿ ಹದಗೊಳಿಸಿ. ಹದಗೊಂಡ ನಂತರ ಸ್ವಲ್ಪ ಕೆಂಪು ಮೆಣಸಿನಕಾಯಿ, ಜಜ್ಜಿದ ಬೆಳ್ಳುಳ್ಳಿ, ಅರಿಶಿನ ಪುಡಿ, ಮತ್ತು ಉಪ್ಪು ಹಾಕಿ ಹುರಿದುಕೊಳ್ಳಿ.
  • ನಂತರ ಕತ್ತರಿಸಿದ ಟೊಮ್ಯಾಟೊ ಸೇರಿಸಿ ಒಳ್ಳೆಯ ಮಿಶ್ರಣ ಮಾಡಿಟ್ಟುಕೊಳ್ಳಿ.
  • ಅಂತಿಮವಾಗಿ, ಹದವಾಗಿಟ್ಟುಕೊಂಡ ಮಿಶ್ರಣ ಮತ್ತು / ಬೇಯಿಸಿದ ಬೇಳೆಯನ್ನು ಸೇರಿಸಿ ಗರಂ ಮಸಾಲಾವನ್ನು ಹಾಕಿ, ನಂತರ 1 ಕಪ್ ನೀರು ಹಾಕಿ 5 ನಿಮಿಷಗಳ ಕಾಲ ಕುದಿಯಲು ಬಿಡಿ.
  • ಸರಿಯಾಗಿ ಕೂದಿಸಿದ ನಂತರ ಕ್ರೀಮ್ ಯಿಂದ ಅಲಂಕರಿಸಿ ನಿಮ್ಮ ದಾಲ್ ತಡ್ಕಾ ಸವಿಯಲು ಸಿದ್ಧ.

Categories:

Rate this recipe

Comments (1)