Holige (kannada) | Hungryaar

Holige (kannada)

Last Updated : 22 Apr 2016 4:09 PM

308-holige-kannada

Sneha Patel

Recipes 38
  • Servings 2
  • Cook Time 15 min
  • Prep Time 200 min

Upload Your Favourite Recipes & Win Rewards

Upload Recipe

Language:

Description:

ಹೋಳಿಗೆಯನ್ನು ಒಬ್ಬಟ್ಟು ಎಂದು ಕೂಡ ಕರೆಯಲಾಗುತ್ತದೆ. ದಕ್ಷಿಣ ಭಾರತದ ಪ್ರಮುಖ ಸಿಹಿ ತಿಂಡಿಗಳಲ್ಲಿ ಇದು ಒಂದಾಗಿದೆ .ಇದನ್ನು ಮದುವೆಗಳಲ್ಲಿ ಪ್ರಮುಖ ಪಾಕವಾಗಿ ಮತ್ತು ದಸರಾ, ಗೌರಿ ಪೂಜೆ , ಗಣೇಶ ಚತುರ್ಥಿ, ಯುಗಾದಿ , ಇತ್ಯಾದಿ ಹಬ್ಬಗಳ ಆಚರಣೆಗಳಲ್ಲಿ ತಯಾರಿಸಲಾಗುತ್ತದೆ. ಮೈದಾ ಹಿಟ್ಟಿನಲ್ಲಿ ಸಿಹಿ ಹುರಣವನ್ನು ತುಂಬಿ ತುಪ್ಪ ಹಾಕಿ ಬೇಯೆಸಿ ಸಾಂಪ್ರದಾಯಿಕವಾಗಿ ಮಾಡಲಾಗುತ್ತದೆ. ಪಾಕವಿಧಾನ ಮಹಾರಾಷ್ಟ್ರದ ಪೂರನ್ಪಲ್ಲಿ ಹೋಲಿಕೆ ಹೊಂದಿದೆ.

Ingredients:

  • 1/4 ಕೆಜಿ ಬೇಳೆ
  • 1/2 ಕೆಜಿ ಬೆಲ್ಲ
  • 1/4 ಕೆಜಿ ಪೇಣೆ ರವ / ಚಿರೋಟಿ ರವ
  • 50 ಗ್ರಾಂ ಮೈದಾ
  • 2 ಚಮಚ ಕಾಯಿ ತುರಿ
  • 1/4 ಚಮಚ ಏಲಕ್ಕಿ ಪುಡಿ
  • 1/4 ಚಮಚ ಅರಿಶಿನ
  • 1/4 ಕಪ್ ಎಣ್ಣೆ

Instructions:

  • ಮೈದಾ ,ರವ, ಅರಿಶಿನ , ನೀರು ಹಾಕಿ ಚನ್ನಾಗಿ ಕಲಸಿ. ಇದಕ್ಕೆ 3 ಚಮಚ ಎಣ್ಣೆ ಸೇರಿಸಿ ಕಣಕ ತಯಾರಿಸಿಕೊಳ್ಳಿ.
  • ಬೇಳೆಯನ್ನು 3 ಕಪ್ ನೀರು ಹಾಕಿ ಬೇಯೆಸಿ( ನಿಮಿಷ) ನಂತರ ನೀರು ಬೇರ್ಪಡಿಸಿ.
  • ಬೇಳೆ, ಕಾಯಿ ತುರಿ, ಏಲಕ್ಕಿ ಪುಡಿ ,ಬೆಲ್ಲ ಹಾಕಿ ನುಣ್ಣಗೆ ರುಬ್ಭಿ
  • ನಿಂಬೆ ಗಾತ್ರದ ಮೈದಾವನ್ನು ತಟ್ಟಿ ಮಧ್ಯದಲ್ಲಿ ಹುರಣವನ್ನು ಇಟ್ಟು ಚಪಾತಿಯಂತೆ ಉದ್ದಿ.
  • ಕಾದ ಕಾವಲಿಗೆ ಉದ್ದಿದ ಹೋಳಿಗೆ ಹಾಕಿ. ಇದಕ್ಕೆ ಸ್ವಲ್ಪ ಎಣ್ಣೆ / ತುಪ್ಪ ಹಾಕಿ ಎರಡು ಬದಿ ಬೇಯೆಸಿ.
  • ಬಿಸಿ ಬಿಸಿ ಹೋಳಿಗೆ ಸವಿಯಲು ಸಿದ್ದ

Categories:

Rate this recipe

Comments (2)